Twenty-five-and-a-quarter years ago I read a newspaper article which said that one day syringes would be one of the major causes of the spread of AIDS, the transmission of AIDS. I thought this was unacceptable. So I decided to do something about it.
ಇಪ್ಪತ್ತೈದು ವರ್ಷಗಳ ಹಿಂದೆ, ನಾನು ಒಂದು ದಿನಪತ್ರಿಕೆಯ ಲೇಖನವನ್ನು ಓದಿದ್ದೆ, ಅದೇನೆಂದರೆ ಮುಂದೊಂದು ದಿನ ಸಿರಿಂಜಸ್ ಗಳು ಏಡ್ಸ್ ಬರುವುದಕ್ಕೆ ಮತ್ತು ಹರಡುವುದಕ್ಕೆ ಪ್ರಮುಖ ಕಾರಣಗಳಾಗುತ್ತವೆ. ನನಗೆ ಇದನ್ನು ಒಪ್ಪಿಕೊಳ್ಳೋಕೆ ಆಗದೆ, ಇದನ್ನು ತಡೆಯಲು ಏನಾದರು ಮಾಡುವ ನಿರ್ಧಾರಕ್ಕೆ ಬಂದೆ.
Sadly, it's come true. Malaria, as we all know, kills approximately one million people a year. The reuse of syringes now exceeds that and kills 1.3 million people a year. This young girl and her friend that I met in an orphanage in Delhi were HIV positive from a syringe. And what was so sad about this particular story was that once their parents had found out -- and don't forget, their parents took them to the doctor -- the parents threw them out on the street. And hence they ended up in an orphanage.
ವಿಷಾದಕರ ಸಂಗತಿಯೆಂದರೆ, ಅದು ನಿಜವಾಯ್ತು. ನಮಗೆಲ್ಲರಿಗೂ ತಿಳಿದಿರೋ ಹಾಗೆ ಮಲೇರಿಯಾ, ಒಂದು ವರ್ಷದಲ್ಲಿ ಸುಮಾರು 10 ಲಕ್ಷ ಜನರನ್ನು ಬಲಿತೆಗೆದುಕೊಂಡಿತು. ಉಪಯೋಗಿಸಿರುವ ಸಿರಿಂಜಸ್ ಗಳನ್ನೂ ಮತ್ತೆ ಮತ್ತೆ ಉಪಯೋಗಿಸುವುದರಿಂದ ಮಲೇರಿಯಾವು ಹೆಚ್ಚಾಗಿ ವರ್ಷದಲ್ಲಿ 13 ಲಕ್ಷ ಜನರನ್ನು ಬಲಿತೆಗೆದುಕೊಳ್ಳಲಾರಂಭಿಸಿತು. ನಾನು, ಈ ಪುಟ್ಟ ಹುಡುಗಿ ಮತ್ತು ಅವಳ ಗೆಳೆಯನನ್ನು ದೆಹಲಿಯ ಅನಾಥಾಶ್ರಮದಲ್ಲಿ ನೋಡಿದ್ದೆ. ಅವರು ಸಿರಿಂಜಸ್ ಗಳಿಂದ ಹೆಚ್.ಐ.ವಿ. ಪೊಸಿಟಿವ್ ಗಳಾಗಿದ್ದರು. ಮತ್ತು ಈ ಮಕ್ಕಳ ಹಿಂದಿರುವ ಕರುಣಾಜನಕ ಕಥೆಯೆಂದರೆ, ಅವರ ತಂದೆ-ತಾಯಿಗೆ ಈ ವಿಷಯ ತಿಳಿಯುತ್ತಿದ್ದ ಹಾಗೆ ( ಮರೆಯಬೇಡಿ, ತಂದೆ-ತಾಯಿಗಳೇ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದರು ) ತಂದೆ-ತಾಯಿಗಳೇ ಅವರನ್ನು ಬೀದಿಗೆ ತಳ್ಳಿದರು. ಈ ಕಾರಣದಿಂದಾಗಿ ಆ ಪುಟ್ಟ ಮಕ್ಕಳು ಅನಾಥಾಶ್ರಮದಲ್ಲಿದ್ದರು.
And it comes from situations like this where you have either skilled or unskilled practitioners, blindly giving an injection to someone. And the injection is so valuable, that the people basically trust the doctor, being second to God, which I've heard many times, to do the right thing. But in fact they're not. And you can understand, obviously, the transmission problem between people in high-virus areas.
ಇದಕ್ಕೆಲ್ಲಾ ಕಾರಣ ನಮ್ಮ ಪರಿಣಿತಿ ಹೊಂದಿದ ಅಥವಾ ಹೊಂದದ ವೈದ್ಯರುಗಳು, ಸುಮ್ಮನೆ ಎಲ್ಲದಕ್ಕೂ ಚುಚ್ಚುಮದ್ದು ನೀಡುವುದು. ಮತ್ತು ಈ ಚುಚ್ಚುಮದ್ದಿನ ಮೇಲೆ ಎಷ್ಟು ಭರವಸೆಯೆಂದರೆ ನಮ್ಮ ಜನರಿಗೆ ವೈದ್ಯರ ಮೇಲೆ ಎಷ್ಟು ನಂಬಿಕೆಯೆಂದರೆ ನಾನು ಬಹಳ ಸಾರಿ ಕೇಳಿರುವ ಹಾಗೆ, ವೈದ್ಯರನ್ನು ಎರಡನೇ ದೇವರು, ಸರಿಯಾಗಿ ಚಿಕಿತ್ಸೆ ನೀಡುತ್ತಾರೆಂದು ಭಾವಿಸಿರುತ್ತಾರೆ. ಆದರೆ ಅದು ನಿಜವಲ್ಲ. ಮತ್ತು ಇದರಿಂದ ನಿಮಗೆ ತಿಳಿಯೋದೇನೆಂದರೆ, ಬಹಳ ರೋಗಾಣುಗಳು ಇರುವ ಪ್ರದೇಶದಲ್ಲಿ ಜನರಿಂದ ಜನರಿಗೆ ರೋಗ ಬೇಗನೆ ಹರಡುತ್ತದೆ.
This video we took undercover, which shows you, over a half an hour period, a tray of medicines of 42 vials, which are being delivered with only 2 syringes in a public hospital in India. And over the course of half an hour, not one syringe was filmed being unwrapped. They started with two and they ended with two. And you'll see, just now, a nurse coming back to the tray, which is their sort of modular station, and dropping the syringe she's just used back in the tray for it to be picked up and used again. So you can imagine the scale of this problem. And in fact in India alone, 62 percent of all injections given are unsafe.
ಇದು ನಾವು ಗುಪ್ತವಾಗಿ ತೆಗೆದ ದೃಶ್ಯ, ಅದು ಸುಮಾರು ಅರ್ಧ ಘಂಟೆ ಅವಧಿಯಲ್ಲಿ, 42 ಔಷಧಿಗಳ ಸಣ್ಣ ಸೀಸೆಗಳನ್ನು, ಭಾರತದ ಒಂದು ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ ಎರಡು ಸೂಜಿಗಳನ್ನು ಉಪಯೋಗಿಸಿ ರೋಗಿಗಳಿಗೆ ನೀಡಲಾಗಿದೆ. ಮತ್ತು ಈ ಅರ್ಧ ಘಂಟೆ ಅವಧಿಯಲ್ಲಿ, ಕನಿಷ್ಠ ಪಕ್ಷ ಒಂದು ಹೊಸ ಸೂಜಿಯನ್ನು ಉಪಯೋಗಿಸಲಿಲ್ಲ. ಅವರು ಎರಡು ಸೂಜಿಯಿಂದ ಶುರು ಮಾಡಿ ಅದೇ ಎರಡು ಸೂಜಿಯಿಂದ ಮುಗಿಸಿದರು. ಮತ್ತು ನೀವು ನೋಡುತ್ತಿರೋ ಹಾಗೆ, ಈಗ ಒಬ್ಬ ನರ್ಸ್ ಟ್ರೇ ಹತ್ರ ವಾಪಸ್ ಬರುತ್ತಿದ್ದಾಳೆ, ಇದು ಒಂದು ರೀತಿಯ ಅವರ ಔಷಧಿಗಳ ಸಂಗ್ರಹ ಕೇಂದ್ರ, ಮತ್ತು ಅವಳು ಈಗ ತಾನೇ ಉಪಯೋಗಿಸಿದ ಸೂಜಿಗಳನ್ನು ಇದೇ ಟ್ರೇಯಲ್ಲಿ ಹಾಕುತ್ತಿದ್ದಾಳೆ ಮತ್ತು ಇದೇ ಟ್ರೇಯಿಂದ ತೆಗೆದು ಮತ್ತೆ ಉಪಯೋಗಿಸುತ್ತಾರೆ. ಈಗ ನೀವೇ ಈ ಸಮಸ್ಯೆಯ ಗಂಭೀರತೆಯನ್ನು ಊಹಿಸಬಹುದು. ಮತ್ತು ಭಾರತ ಒಂದೇ ದೇಶದಲ್ಲಿ, 62% ರೋಗಿಗಳಿಗೆ ಕೊಡುವ ಚುಚ್ಚುಮದ್ದುಗಳು ಸುರಕ್ಷಿತವಲ್ಲ.
These kids in Pakistan don't go to school. They are lucky. They already have a job. And that job is that they go around and pick up syringes from the back of hospitals, wash them, and in the course of this, obviously picking them up they injure themselves. And then they repackage them and sell them out on markets for literally more money than a sterile syringe in the first place, which is quite bizarre. In an interesting photo, their father, while we were talking to him, picked up a syringe and pricked his finger -- I don't know whether you can see the drop of blood on the end -- and immediately whipped out a box of matches, lit one, and burned the blood off the end of his finger, giving me full assurance that that was the way that you stopped the transmission of HIV.
ಈ ಮಕ್ಕಳು ಪಾಕಿಸ್ತಾನದಲ್ಲಿ ಶಾಲೆಗೆ ಹೋಗುವುದಿಲ್ಲ. ಅವರು ಅದೃಷ್ಟಶಾಲಿಗಳು. ಅವರಿಗೆ ಈಗಾಗಲೇ ಕೆಲಸ ಇದೆ. ಆ ಕೆಲಸವೇನೆಂದರೆ ಅವರು ಎಲ್ಲಾ ಕಡೆ ಸುತ್ತಾಡಿ ಸಿರೀಂಜಸ್ ಗಳನ್ನು ಸಂಗ್ರಹಿಸುವುದು ಆಸ್ಪತ್ರೆಯ ಹಿಂದೆಯೆಲ್ಲಾ ಸುತ್ತಾಡಿ ಆರಿಸುತ್ತಾರೆ, ಅವುಗಳನ್ನು ತೊಳೆದು ಸ್ವಚ್ಚ ಮಾಡುತ್ತಾರೆ ಮತ್ತು ಹೀಗೆ ಮಾಡುವಾಗ ಅಂದರೆ ಆರಿಸುವಾಗ ಮತ್ತು ತೊಳೆಯುವಾಗ ಅವರಿಗೆ ಗಾಯಗಳಾಗುತ್ತವೆ. ಮತ್ತೆ ಅವರು ಆ ಸೂಜಿಗಳನ್ನು ಪುನಃ ಹೊಸದರಂತೆ ಮಾಡಿ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ ಅದೂ ಸ್ಟೆರೈಲ್ ಸಿರೀಂಜ್ ಗಳಿಗಿಂತ ಕಡಿಮೆ ಬೆಲೆಗೆ. ಇದು ಒಂದು ರೀತಿಯ ವಿಚಿತ್ರವೂ ಹೌದು. ಈ ಫೋಟೋದಲ್ಲಿರುವ ಆ ಮಕ್ಕಳ ತಂದೆಯ ಹತ್ತಿರ ಮಾತನಾಡುತ್ತಿರುವಾಗ, ಒಂದು ಸಿರೀಂಜ್ ಅನ್ನು ತೆಗೆದುಕೊಂಡು, ಅವರ ಬೆರಳಿಗೆ ಚುಚ್ಚಿಕೊಂಡರು-- ನಂಗೊತ್ತಿಲ್ಲ, ನಿಮಗೆ ಕೊನೆಯಲ್ಲಿ ರಕ್ತ ಕಾಣಿಸುತ್ತಿದೆಯೋ ಅಥವಾ ಇಲ್ಲವೋ ಎಂದು-- ತಕ್ಷಣ ಅವರು ಒಂದು ಬೆಂಕಿ ಕಡ್ಡಿಯನ್ನು ತೆಗೆದು, ಹಚ್ಚಿ ರಕ್ತ ಬರುವ ಸ್ಥಳದಲ್ಲಿ ಇಟ್ಟು ಬೆರಳಿನ ತುದಿಯನ್ನು ಸುಟ್ಟುಬಿಟ್ಟರು, ಮತ್ತು ನನಗೆ ಪೂರ್ತಿ ಭರವಸೆಯನ್ನು ಕೊಡುತ್ತಾ ಹೇಳಿದರು ಈ ರೀತಿ ಮಾಡುವುದರಿಂದ ನೀವು ಹೆಚ್.ಐ.ವಿ. ಹರಡುವುದನ್ನು ತಡೆಯಬಹುದು.
In China, recycling is a major issue. And they are collected en mass -- you can see the scale of it here -- and sorted out, by hand, back into the right sizes, and then put back out on the street. So recycling and reuse are the major issues here. But there was one interesting anecdote that I found in Indonesia. In all schools in Indonesia, there is usually a toy seller in the playground. The toy seller, in this case, had syringes, which they usually do, next door to the diggers, which is obviously what you would expect. And they use them, in the breaks, for water pistols. They squirt them at each other, which is lovely and innocent. And they are having great fun. But they also drink from them while they're in their breaks, because it's hot. And they squirt the water into their mouths. And these are used with traces of blood visible.
ಚೀನಾದಲ್ಲಿ ವಸ್ತುಗಳ ಪುನರ್ಬಳಕೆ ಒಂದು ಪ್ರಮುಖ ಸಮಸ್ಯೆ. ಮತ್ತು ಅವರು ಅವುಗಳನ್ನು ದೊಡ್ಡ ಗಾತ್ರದಲ್ಲಿ ಸಂಗ್ರಹಿಸುತ್ತಾರೆ--ಇದನ್ನು ನೀವು ಇಲ್ಲಿ ಕಾಣಬಹುದು. ಮತ್ತು ಅವರು ಅವುಗಳನ್ನು ಕೈಯಾರೆ ಕ್ರಮಬಧ್ಧವಾಗಿ ವಿಂಗಡಿಸುತ್ತಾರೆ, ಮತ್ತು ಪುನಃ ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಆದ್ದರಿಂದ ಪುನರ್ಬಳಕೆ ಮಾಡುವುದು ಒಂದು ಪ್ರಮುಖ ಸಮಸ್ಯೆಯಾಗಿದೆ. ಆದರೆ ನಾವು ಇಂಡೋನೇಶ್ಯಾದಲ್ಲಿ ಒಂದು ಸಣ್ಣ ನೈಜ ಕಥೆಯನ್ನು ಕಂಡೆವು. ಇಂಡೋನೇಶ್ಯಾದ ಪ್ರತಿಯೊಂದು ಶಾಲೆಯ ಮೈದಾನದಲ್ಲಿ ಒಬ್ಬ ಆಟದ ಸಾಮಾನು ಮಾರುವವನಿರುತ್ತಾನೆ. ಇಲ್ಲಿ ಆಟದ ಸಾಮಾನು ಮಾರುವವನ ಬಳಿ ಸಿರೀಂಜಸ್ ಗಳಿರುತ್ತವೆ, ಅದರಿಂದ ಅವರು ಏನು ಮಾಡುವರೆಂದು ನೀವೇ ಊಹಿಸಬಹುದು. ಈ ಸಿರೀಂಜಸ್ ಗಳನ್ನು ಮಕ್ಕಳು ವಿರಾಮ ಸಮಯದಲ್ಲಿ ಆಟ ಆಡಲು ಉಪಯೋಗಿಸುತ್ತಾರೆ. ಇದರೊಂದಿಗೆ ಅವರು ನೀರನ್ನು ಎರಚಾಡುವ ಆಟವನ್ನು ಮುಗ್ಧತೆಯಿಂದ ಆಡುತ್ತಾರೆ. ಈ ಆಟದಿಂದ ಅವರು ತುಂಬಾ ಖುಷಿಪಡುತ್ತಾರೆ. ಹಾಗೆಯೇ ಅವರು ಇದರಿಂದ ನೀರನ್ನು ಸಹ ಕುಡಿಯುತ್ತಾರೆ ಯಾಕೆಂದರೆ ವಿರಾಮದ ಸಮಯದಲ್ಲಿ ಬಿಸಿಲ ಬೇಗೆಯನ್ನು ತಾಳಲಾರದೆ ನೀರನ್ನು ಕುಡಿಯುತ್ತಾರೆ, ಮತ್ತು ಒಬ್ಬರಿಗೊಬ್ಬರು ಮುಖದ ಮೇಲೆಲ್ಲಾ ನೀರನ್ನು ಎರಚಾಡುತ್ತಾರೆ. ಮತ್ತು ಈ ಸಿರೀಂಜಸ್ ಗಳು ರಕ್ತದ ಅಂಶವನ್ನು ಹೊಂದಿರುತ್ತವೆ.
So we need a better product. And we need better information. And I think, if I can just borrow this camera, I was going to show you my invention, which I came up with. So, it's a normal-looking syringe. You load it up in the normal way. This is made on existing equipment in 14 factories that we license. You give the injection and then put it down. If someone then tries to reuse it, it locks and breaks afterwards. It's very, very simple. Thank you. (Applause) And it costs the same as a normal syringe. And in comparison, a Coca-Cola is 10 times the price. And that will stop reusing a syringe 20 or 30 times.
ಅದಕ್ಕಾಗಿ ನಮಗೆ ಒಳ್ಳೆಯ ಸಾಮಗ್ರಿ ಹಾಗೂ ಮಾಹಿತಿಗಳು ಬೇಕಾಗಿವೆ. (ದಯವಿಟ್ಟು ಕ್ಯಾಮೆರಾ ಮುಂದೆ ತಂದು ಸಹಕರಿಸಿ) ಈಗ ನಿಮಗೆ ನನ್ನ ಶೋಧನೆಯನ್ನು ತೋರಿಸುತ್ತೇನೆ, ಅದೇನೆಂದರೆ. ಇದು ನೋಡಲು ಸಹಜವಾದ ಸಿರೀಂಜ್. ಮತ್ತು ಇದನ್ನು ಸಹಜ ರೀತಿಯಲ್ಲಿ ತುಂಬಿ.ಇದನ್ನು ಪರವಾನಿಗೆ ಪಡೆದ ೧೪ ಕಾರ್ಖಾನೆಗಳಲ್ಲಿ ಮಾಡಲಾಗುತ್ತಿದೆ. ಇದನ್ನು ಒಂದು ಬಾರಿ ಉಪಯೋಗಿಸಿ, ನಂತರ ಬಿಸಾಕಿ. ಇದನ್ನು ಯಾರಾದರು ಪುನರ್ಬಳಕೆ ಮಾಡಲು ಪ್ರಯತ್ನಿಸಿದರೆ, ಅದು ತನ್ನಿಂದ ತಾನೇ ಲಾಕ್ ಆಗಿ ನಂತರ ಮುರಿದುಹೊಗುತ್ತದೆ. ಇದು ತುಂಬಾ ಸರಳ. ಧನ್ಯವಾದಗಳು. (ಚಪ್ಪಾಳೆಗಳು) ಮತ್ತು ಇದರ ಬೆಲೆ ಕೂಡ ಸಹಜ ಸಿರೀಂಜ್ ನಷ್ಟೇ ಇದೆ. ಮತ್ತು ಇದನ್ನು ಕೋಕಾ-ಕೋಲಾ ಜೊತೆ ಹೋಲಿಕೆ ಮಾಡಿದಾಗ ಕೋಕಾ-ಕೋಲಾವು ಇದರ 10 ರಷ್ಟಿದೆ. ಮತ್ತು ಇದರಿಂದ ಪುನರ್ಬಳಕೆ ಮಾಡುವುದು 20-30 ಪಟ್ಟು ಕಡಿಮೆಯಾಗುತ್ತದೆ.
And I have an information charity which has done huge scale amount of work in India. And we're very proud of giving information to people, so that little kids like this don't do stupid things. Thank you very much. (Applause)
ಇದಕ್ಕಾಗಿ ನಾನು ಇದರ ಬಗ್ಗೆ ಮಾಹಿತಿ ನೀಡುವ ಒಂದು ಸಂಸ್ಥೆಯನ್ನು ಹೊಂದಿದ್ದೇನೆ ಅದು ಭಾರತದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಇದರಿಂದ ನಮಗೆ ಬಹಳ ಹೆಮ್ಮೆ ಇದೆ. ಇದರಿಂದ ಪುಟ್ಟ ಪುಟ್ಟ ಮಕ್ಕಳು ಮೂರ್ಖರ ರೀತಿ ಆಟ ಆಡದೇ ಇರಲಿ. ಧನ್ಯವಾದಗಳು. (ಚಪ್ಪಾಳೆಗಳು)